Our Core Mission (Sriraksha Dharma Sabha)
The Trust is dedicated to preserving and promoting the timeless wisdom of the Vedas by encouraging Veda chanting, study, and its application in modern life for peace, harmony, and well-being. It seeks to highlight the ecological and social relevance of these texts, fostering awareness of the natural harmony between soil, plants, trees, and mankind. To achieve this, the Trust supports classes, workshops, training centres, and parayan programs, enabling people to practice Vedic knowledge in their daily lives. It further extends its efforts by supporting students with education, hostels, scholarships, books, and other incentives—without discrimination of caste, creed, or gender—while also encouraging the pursuit of science, literature, music, drama, fine arts, yoga, philosophy, and cultural preservation.
Alongside education and culture, the Trust is committed to humanitarian and social welfare activities. It provides relief to the poor, needy, orphans, widows, and the aged, and extends aid during natural calamities such as floods, earthquakes, or famine. It supports schools, colleges, laboratories, and community halls, while also maintaining homes for the aged and orphans. The Trust allocates funds, accepts donations, and collaborates with like-minded organizations to achieve these objectives. Through its work, it aspires to nurture self-reliance, preserve heritage, and serve society by advancing knowledge, compassion, and public welfare.
ಟ್ರಸ್ಟ್‌ನ ಮುಖ್ಯ ಧ್ಯೇಯವು ವೇದಗಳ ಶಾಶ್ವತ ಜ್ಞಾನವನ್ನು ಸಂರಕ್ಷಿಸಿ, ಅದರ ಪಠಣ, ಅಧ್ಯಯನ ಹಾಗೂ ಆಧುನಿಕ ಜೀವನದಲ್ಲಿ ಅನ್ವಯವನ್ನು ಉತ್ತೇಜಿಸುವುದಾಗಿದೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಸುಖಶ್ರೇಯಸ್ಸನ್ನು ಬೆಳಸುವ ಉದ್ದೇಶದಿಂದ ಪರಿಸರ ಹಾಗೂ ಸಾಮಾಜಿಕ ಮೌಲ್ಯಗಳೊಂದಿಗೆ ವೇದಗಳ ಸಂಬಂಧವನ್ನು ಪ್ರಚಾರ ಮಾಡುತ್ತದೆ. ತರಗತಿಗಳು, ಕಾರ್ಯಾಗಾರಗಳು ಮತ್ತು ಪಾರಾಯಣ ಕಾರ್ಯಕ್ರಮಗಳ ಮೂಲಕ ವೇದ ಅಧ್ಯಯನವನ್ನು ಉತ್ತೇಜಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ವಸತಿ, ವಿದ್ಯಾರ್ಥಿವೇತನ, ಪಠ್ಯಸಾಮಗ್ರಿ ಹಾಗೂ ಇತರ ಪ್ರೋತ್ಸಾಹಗಳನ್ನು ಭೇದಭಾವವಿಲ್ಲದೆ ಒದಗಿಸುತ್ತದೆ. ಜೊತೆಗೆ ವಿಜ್ಞಾನ, ಸಾಹಿತ್ಯ, ಸಂಗೀತ, ನಾಟಕ, ಲಲಿತಕಲೆ, ಯೋಗ, ತತ್ತ್ವಶಾಸ್ತ್ರ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಉತ್ತೇಜಿಸುವುದಕ್ಕೂ ಬದ್ಧವಾಗಿದೆ.
ಇದೇ ವೇಳೆ, ಟ್ರಸ್ಟ್ ಮಾನವೀಯ ಹಾಗೂ ಸಾಮಾಜಿಕ ಕಲ್ಯಾಣದ ಕ್ಷೇತ್ರಗಳಲ್ಲಿಯೂ ಮಹತ್ವದ ಸೇವೆ ಸಲ್ಲಿಸುತ್ತದೆ. ಬಡವರು, ಅನಾಥರು, ವಿಧವೆಯರು ಮತ್ತು ವೃದ್ಧರಿಗೆ ನೆರವು ನೀಡುವುದು, ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ತುರ್ತು ಸಹಾಯ ಒದಗಿಸುವುದು, ಹಾಗೂ ಶಾಲೆಗಳು, ಕಾಲೇಜುಗಳು, ಪ್ರಯೋಗಾಲಯಗಳು ಮತ್ತು ಸಮುದಾಯ ಭವನಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಸಹಕಾರ ನೀಡುವುದು ಇದರ ಉದ್ದೇಶವಾಗಿದೆ. ದೇಣಿಗೆಗಳು ಮತ್ತು ನಿಧಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಸಮಾನ ಮನೋಭಾವದ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ಆತ್ಮನಿರ್ಭರತೆ, ಜ್ಞಾನ, ಕರುಣೆ ಮತ್ತು ಸಾರ್ವಜನಿಕ ಕಲ್ಯಾಣವನ್ನು ವೃದ್ಧಿಸುವುದು ಟ್ರಸ್ಟ್‌ನ ಆಶಯವಾಗಿದೆ.
🌸 ವಿಪ್ರಮಹಾನಿಧಿ ಧ್ಯೇಯೋದ್ದೇಶಗಳು 🌸
- 1. ಆಪತ್ತಿನಲ್ಲಿ ನಿರ್ಧನಿಕ ವಿಪ್ರರಿಗೆ ನೆರವು ನೀಡುವ ಸಂಘ.
- 2. ಅಪಘಾತ, ಮಹಾಮಾರಿ ರೋಗಗಳಿಂದ ಬಳಲುವ ವಿಪ್ರರಿಗೆ ಆಪದ್ಬಾಂಧವನಾಗಲಿದೆ.
- 3. ಅಂಗವಿಕಲತೆಯಿಂದ ವೃತ್ತಿ ಅಸಾಧ್ಯರಾದವರಿಗೆ ಮಾಸಿಕ ವೇತನ ನೀಡುವ ಸಂಘ.
- 4. ದೀರ್ಘಕಾಲ ಅನಾರೋಗ್ಯದಿಂದ ಬಳಲುವ ಕುಟುಂಬಗಳನ್ನು ಉದ್ಧರಿಸುವ ಸಂಘ.
- 5. ಔಷಧಿ, ಚಿಕಿತ್ಸಾ ಸಾಲ ತೀರಿಸಲು ಅಸಾಧ್ಯವಾದ ಬಡವರಿಗೆ ಬಂಗಾರವಾಗುವ ಸಂಘ.
- 6. ಆಮ್ಲಜನಕ, ರಕ್ತ, ವಾಕರ್, ವಾಟರ್ ಬೆಡ್, ಗಾಲಿ ಕುರ್ಚಿ ಮುಂತಾದ ವಸ್ತುಗಳನ್ನು ನೀಡಿ ನೆರವಾಗುವ ಸಂಘ.
- 7. ಬಾಡಿಗೆ ಕಟ್ಟಲು, ಮನೆ ಪೂರ್ಣಗೊಳಿಸಲು ಅಸಾಧ್ಯವಾದಾಗ ಕೈಜೋಡಿಸುವ ಸಂಘ.
- 8. ವಿವಾಹ, ಉಪನಯನ, ವೇದಸಂತತಿ ಪೋಷಣೆ ಕಾರ್ಯಗಳಲ್ಲಿ ನೆರವಾಗುವ ಸಂಘ.
- 9. ಮರಣೋತ್ತರ ವಿಧಿಗಳಿಗೆ ಸಹಕಾರ ನೀಡಿ ಮೋಕ್ಷದ ಹಾದಿ ತೋರುವ ಸಂಘ.
- 10. ಎಲ್ಲ ರಾಜ್ಯಗಳ ವಿಪ್ರರನ್ನು ಸಂಘಟಿಸಿ ವಿಪ್ರರಿಂದ ವಿಪ್ರರಿಗಾಗಿ ನೆರಳಾಗುವ ಏಕೈಕ ಸಂಘ.